ಅಭಿಪ್ರಾಯ / ಸಲಹೆಗಳು

ಪಶುಪಾಲಕರ ಸಹಾಯವಾಣಿ

8277 100 200

24*7

ಪರಿಚಯ 

 

ಪಶುಪಾಲನಾ ಇಲಾಖೆಯು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ 'ಪ್ರಾಣಿ ರೋಗ ಕಣ್ಗಾವಲು ಜಾಲದ ಬಲವರ್ಧನೆ' ಕಾರ್ಯಕ್ರಮದ ಅಡಿಯಲ್ಲಿ 'ಸಹಾಯವಾಣಿ' ಯನ್ನುಜಂಟಿ ನಿರ್ದೇಶಕರು (ಪಶು ಆರೋಗ್ಯ) ಇವರ ಕಛೇರಿ ಆವರಣ, ಹೆಬ್ಬಾಳ, ಬೆಂಗಳೂರು ಇಲ್ಲಿ ಸ್ಥಾಪಿಸಿ, ಪಶುಪಾಲಕರ ಸಹಾಯವಾಣಿ ಕೇಂದ್ರದ ಉದ್ಘಾಟನೆಯನ್ನು ಮಾನ್ಯ ಪಶುಸಂಗೋಪನಾ ಸಚಿವರಾದ ಶ್ರೀ. ಟಿ. ಬಿ. ಜಯಚಂದ್ರ ರವರು ದಿನಾಂಕ 11ನೇ ಫೆಬ್ರವರಿ 2014 ರಂದು ನೆರವೇರಿಸಿದರು.

 

ಪ್ರಾರಂಭದಲ್ಲಿ, ಪಶುಪಾಲಕರ ಸಹಾಯವಾಣಿಗೆ ಬೆಂಗಳೂರು ಗ್ರಾಮಾಂತರ, ಮೈಸೂರು, ಬೆಳಗಾವಿ ಮತ್ತು ಕಲಬುರ್ಗಿ ಜಿಲ್ಲೆಗಳಿಂದ ಕರೆಗಳನ್ನು ಸ್ವೀಕರಿಸಲು ಕ್ರಮ ವಹಿಸಲಾಯಿತು. ನಂತರ, ಪಶುಪಾಲಕರ ಸಹಾಯವಾಣಿ ಸೇವೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಯಿತು.ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಹಾಯವಾಣಿ ಮೂಲಕ ಸೇವೆ ನೀಡಲಾಯಿತು.

 

ತದನಂತರ ಸಹಾಯವಾಣಿ ಸೇವೆಯನ್ನು ದಿನದ 24/7 ಗಂಟೆಗಳವರೆಗೆ  ವಿಸ್ತರಿಸಿ ಪ್ರಾಣಿ ಕಲ್ಯಾಣ ಸಹಾಯವಾಣಿ ಎಂದು ಹೆಸರಿಸಿ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪಶುಪಾಲನಾ ಭವನದ 6ನೇ ಮಹಡಿಯಲ್ಲಿ ಸ್ಥಾಪಿಸಲಾಗಿರುತ್ತದೆ.ಪ್ರಾಣಿ ಕಲ್ಯಾಣ ಸಹಾಯವಾಣಿಯು ಮಾನ್ಯ ಮುಖ್ಯಮಂತ್ರಿಯವರಾದ ಶ್ರೀಯುತ ಬಿ.ಎಸ್.ಯಡಿಯೂರಪ್ಪ ರವರ ಹಸ್ತದಿಂದ   ಮಾನ್ಯ ಪಶುಸಂಗೋಪನಾ ಸಚಿವರಾದ ಶ್ರೀ ಪ್ರಭು ಚವಾಣ್‌ ರವರ ಉಪಸ್ಥಿತಿಯಲ್ಲಿ ದಿನಾಂಕ: 23.06.2021 ರಂದು ಉದ್ಘಾಟನೆಯಾಗಿರುತ್ತದೆ.

 

ರಾಜ್ಯದ ಪಶುಸಂಗೋಪನಾ ಚಟುವಟಿಕೆಗಳಲ್ಲಿ ನಿರತರಾಗಿರುವ ರೈತರು ಮತ್ತು ಪ್ರಾಣಿ ಕಲ್ಯಾಣ ಆಸ್ತಕರು, ಉಚಿತ ದೂರವಾಣಿ ಸಂಖ್ಯೆ 8277 100 200  ಕ್ಕೆ 24/7 ಗಂಟೆಯೂ  ಕರೆ ಮಾಡಿ, ಸಹಾಯವಾಣಿಯಲ್ಲಿ ಕಾರ್ಯನಿರ್ವಹಿಸುವ ಪಶುವೈದ್ಯರು ಮತ್ತು ಇತರೆ ವಿಷಯ ತಜ್ಞರಿಂದ ಅಗತ್ಯ ಮಾಹಿತಿ ಪಡೆಯಬಹುದಾಗಿದೆ.

 

ಸಹಾಯವಾಣಿಯ ಮೂಲಕ ಲಭ್ಯವಿರುವ ಮಾಹಿತಿಗಳು:

ಇಲಾಖೆಯ ವತಿಯಿಂದ ಲಭ್ಯವಿರುವ ತಾಂತ್ರಿಕ ಸೇವೆಗಳ ಬಗ್ಗೆ ಮಾಹಿತಿ.

  • ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ಸಾಮಾಜಿಕ-ಆರ್ಥಿಕ ಕಾರ್ಯಕ್ರಮಗಳ ವಿವಿರ.
  • ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆ, ಮೊಲ ಸಾಕಾಣಿಕೆ, ಹಂದಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಕುರಿತಂತೆ ಇಲಾಖೆಯ ತರಬೇತಿ ಕೇಂದ್ರಗಳಲ್ಲಿ ನಡೆಯುವ ತರಬೇತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ.
  • ಜಾನುವಾರು ರೋಗಗಳು, ಲಸಿಕಾ ಕಾರ್ಯಕ್ರಮ ಹಾಗೂ ಜಾನುವಾರು ರೋಗ ತಡೆಗಟ್ಟಲು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವಿವರ.
  • ದೇಶಿ ಹಾಗೂ ವಿದೇಶಿ ಜಾನವಾರು ತಳಿಗಳ ಬಗ್ಗೆ ಮಾಹಿತಿ.
  • ಜಾನುವಾರುಗಳಲ್ಲಿ ನಿಯಮಿತವಾಗಿ ನೀಡಬೇಕಾಗಿರುವ ಲಸಿಕೆಗಳ ಕುರಿತು ವಿವರಣೆ.
  • ಪಶುಸಂಗೋಪನಾ ಚಟುವಟಿಕೆಗಳಿಗೆ ವಿವಿಧ ಬ್ಯಾಂಕುಗಳಿಂದ ದೊರೆಯಬಹುದಾದ ಸಾಲ ಸೌಲಭ್ಯ ಕುರಿತು ಮಾಹಿತಿ.
  • ಮಿಶ‍್ರತಳಿ ಹಸು, ಕುರಿ ಮತ್ತು ಮೇಕೆ, ಹಂದಿಗಳ ಅಂದಾಜು ಬೆಲೆ ಹಾಗೂ ಅವುಗಳ ಲಭ್ಯತೆ ಕುರಿತಂತೆ ಸೂಕ್ತ ಸ್ಥಳಗಳ ವಿವರ.
  • ಯಶಸ್ವಿ ಹೈನುಗಾರಿಕೆಗೆ ಅಗತ್ಯವಿರುವ ಮೇವಿನ ಬೆಳೆಗಳ ಬಗ್ಗೆ ಮಾಹಿತಿ.
  • ತುರ್ತು ಪಶುವೈದ್ಯ ಸೇವೆಗಾಗಿ ಒಳಬರುವ ಕರೆಗಳನ್ನು ಹತ್ತಿರದ ಇಲಾಖಾ ತಾಂತ್ರಿಕ ಸಿಬ್ಬಂದಿ/ಅಧಿಕಾರಿಗೆ ವರ್ಗಾಯಿಸಿ, ಅಗತ್ಯ ಸೇವೆ ದೊರೆಯುವಂತೆ ಸಹಕರಿಸುವುದು.

ಇತ್ತೀಚಿನ ನವೀಕರಣ​ : 27-07-2022 12:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080