ಅಭಿಪ್ರಾಯ / ಸಲಹೆಗಳು

ಕಾಯ್ದೆ ಮತ್ತು ನಿಯಮಗಳು

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಗೆ ಸಂಬಂಧಪಟ್ಟ ಈ ಕೆಳಕಂಡ ಕಾಯ್ದೆಗಳು/ಮಸೂದೆಗಳು ಜಾರಿಯಲ್ಲಿರುತ್ತವೆ. ಇವುಗಳನ್ನು ಅಗತ್ಯಕ್ಕೆ ತಕ್ಕಂತೆ ಜಾರಿಗೊಳಿಸುವ ಜವಾಬ್ದಾರಿಯನ್ನು ಇಲಾಖೆಯು ಹೊಂದಿರುತ್ತದೆ.

 

 1. ಕರ್ನಾಟಕ ಗೋಹತ್ಯೆ ತಡೆ ಮತ್ತು ದನಕರು ಸಂರಕ್ಷಣಾ ಅಧಿನಿಯಮ 1964 ಮತ್ತು ನಿಯಮಗಳು 1967
  ರಾಜ್ಯದಲ್ಲಿ ಗೋವು ಮತ್ತು ಕರುಗಳ ಹಾಗೂ ಎಮ್ಮೆ ಮತ್ತು ಎಮ್ಮೆ ಕರುಗಳ ಹತ್ಯೆಯನ್ನು ತಡೆಯುವುದಕ್ಕಾಗಿ ಹಾಗೂ ಇತರೆ ದನಕರುಗಳ ರಕ್ಷಣೆಗಾಗಿ ಉಪಬಂಧ ಕಲ್ಪಿಸುವ ಅಧಿನಿಯಮ.
 2. ಕರ್ನಾಟಕ ದನಕರು ಅತಿಕ್ರಮ ಪ್ರವೇಶ ಅಧಿನಿಯಮ 1966 ಮತ್ತು ಕರ್ನಾಟಕ ದನಕರು ಅತಿಕ್ರಮ ಪ್ರವೇಶ ನಿಯಮಗಳು 1971
  ಭೂಮಿ ಅಥವಾ ಇತರೆ ಸ್ವತ್ತುಗಳಿಗೆ ಹಾನಿಯನ್ನುಂಟುಮಾಡುವ ದನಕರುಗಳನ್ನು ದೊಡ್ಡಿಯಲ್ಲಿ ಕೂಡಿಹಾಕುವುದಕ್ಕೆ ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳಿಗೆ ಉಪಬಂಧಿಸುವ ಅಧಿನಿಯಮ.
 3. ಕರ್ನಾಟಕ ಪುರಸಭಾ ನಿಗಮಗಳ ಅಧಿನಿಯಮ 1976 ಮತ್ತು ನಿಯಮಗಳು
  ಕರ್ನಾಟಕ ರಾಜ್ಯದಲ್ಲಿ ಪುರಸಭಾ ನಿಗಮಗಳ ಸ್ಥಾಪನೆಗೆ ಸಂಬಂಧಿಸಿದಂತೆ ಕಾನೂನುಗಳನ್ನು ಕ್ರೋಢೀಕರಿಸುವ ಮತ್ತು ತಿದ್ದುಪಡಿ ಮಾಡುವ ಅಧಿನಿಯಮ.
 4. ಕರ್ನಾಟಕ ಪ್ರಾಣಿಬಲಿಯನ್ನು ತಡೆಗಟ್ಟುವ ಅಧಿನಿಯಮ 1959 ಮತ್ತು ನಿಯಮಗಳು
  ಕರ್ನಾಟಕ ರಾಜ್ಯದಲ್ಲಿ ಪೂಜಾ ಸ್ಥಳಗಳ ಆವರಣಗಳಲ್ಲಿ ಹಾಗೂ ಆವರಣಗಳೊಳಗೆ ಪ್ರಾಣಿಬಲಿಯನ್ನು ತಡೆಗಟ್ಟುವ ಅಧಿನಿಯಮ.
 5. ಕರ್ನಾಟಕ ಜಾನುವಾರು ಸುಧಾರಣಾ ಅಧಿನಿಯಮ 1961 ಮತ್ತು ನಿಯಮಗಳು 1969
  ಕರ್ನಾಟಕ ರಾಜ್ಯದಲ್ಲಿ ಜಾನುವಾರು ಸುಧಾರಣೆಗಾಗಿ ಉಪಬಂಧ ಕಲ್ಪಿಸುವ ಅಧಿನಿಯಮ.
 6. ಜಾನುವಾರು ಆಮದು ಅಧಿನಿಯಮ 1968
  ಜಾನುವಾರು ಆಮದನ್ನು ನಿಯಂತ್ರಿಸುವುದಕ್ಕೆ ಉತ್ತಮ ಉಪಬಂಧವನ್ನು ಕಲ್ಪಿಸುವ ಅಧಿನಿಯಮ.
 7. ಕರ್ನಾಟಕ ಕುರಿ ಮತ್ತು ಕುರಿ ಉತ್ಪನ್ನಗಳ ಅಭಿವೃದ್ಧಿ ಅಧಿನಿಯಮ 1973
  ಕರ್ನಾಟಕ ರಾಜ್ಯದಲ್ಲಿ ಕುರಿ ಮತ್ತು ಕುರಿ ಉತ್ಪನ್ನಗಳ ಅಭಿವೃದ್ಧಿಗಾಗಿ ಒಂದು ಮಂಡಳಿಯನ್ನು ಸ್ಥಾಪಿಸಲು ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳಿಗಾಗಿ ಉಪಬಂಧ ಕಲ್ಪಿಸುವ ಅಧಿನಿಯಮ.
 8. ವನ್ಯಜೀವಿ ಸಂರಕ್ಷಣಾ ಅಧಿನಿಯಮ 1972 ಮತ್ತು ವನ್ಯಜೀವಿ (ಸಂರಕ್ಷಣಾ) (ಕರ್ನಾಟಕ) ನಿಯಮಗಳು 1973
  ವನ್ಯಜೀವಿಗಳು, ಪಕ್ಷಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ಅಥವಾ ಅದಕ್ಕೆ ಸಹಾಯಕವಾಗಬಹುದಾದ ಅಥವಾ ಪ್ರಾಸಂಗಿಕವಾದ ವಿಷಯಗಳನ್ನು ಉಪಬಂಧಿಸುವ ಅಧಿನಿಯಮ.
 9. ಪ್ರಾಣಿಗಳಲ್ಲಿನ ಸೋಂಕುಕಾರಕ ಮತ್ತು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ಅಧಿನಿಯಮ 2009
  ಪ್ರಾಣಿಗಳನ್ನು ಬಾಧಿಸುವ ಸೋಂಕುಕಾರಕ ಮತ್ತು ಸಾಂಕ್ರಾಮಿಕ ರೋಗಗಳನ್ನು ಪ್ರತಿಬಂಧಿಸುವ ಮತ್ತು ನಿಯಂತ್ರಿಸುವ ಹಾಗೂ ನಿರ್ಮೂಲನೆಗೊಳಿಸುವುದಕ್ಕಾಗಿ ಮತ್ತು ಅಂಥ ರೋಗಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯದಲ್ಲಿ ತಲೆದೋರುವುದನ್ನು ಅಥವಾ ಹರಡುವುದನ್ನು ತಡೆಗಟ್ಟುವುದಕ್ಕಾಗಿ ಮತ್ತು ಪ್ರಾಣಿಜನ್ಯ ಮತ್ತು ಪ್ರಾಣಿಜನ್ಯ ಉತ್ಪನ್ನಗಳಿಗೆ ಆಮದು ಮತ್ತು ರಫ್ತು ಸೌಲಭ್ಯ ಕಲ್ಪಿಸುವ ವಿಷಯಗಳಿಗೆ ಸಂಬಂಧಪಟ್ಟಂತೆ ಭಾರತದ ಅಂತಾರಾಷ್ಟ್ರೀಯ ಹೊಣೆಗಾರಿಕೆಯನ್ನು ಅದಕ್ಕೆ ಸಂಬಂಧಿಸಿದ ಪ್ರಾಸಂಗಿಕ ವಿಷಯಗಲನ್ನು ಕಾರ್ಯಗತಗೊಳಿಸುವ ಅಧಿನಿಯಮ.
 10. ಔಷಧಗಳು ಮತ್ತು ಪ್ರಸಾಧನ ಸಾಮಗ್ರಿಗಳ ಅಧಿನಿಯಮ 1940
  ಔಷಧಗಳು ಮತ್ತು ಪ್ರಸಾಧನ ಸಾಮಗ್ರಿಗಳ ಆಮದು ತಯಾರಿಕೆಗಳು, ವಿತರಣೆ ಮತ್ತು ಮಾರಾಟವನ್ನು ನಿಯಂತ್ರಿಸುವ ಅಧಿನಿಯಮ.
 11. ಭಾರತೀಯ ಪಶುವೈದ್ಯಕೀಯ ಪರಿಷತ್ತು ಅಧಿನಿಯಮ 1984 - ಕೆವಿಡಿ ನಿಯಮಗಳು 1998
  ಪಶುವೈದ್ಯಕೀಯ ವೃತ್ತಿಯನ್ನು ನಿಯಂತ್ರಿಸುವುದಕ್ಕಾಗಿ ಮತ್ತು ರಾಜ್ಯ ಪಶುವೈದ್ಯಕೀಯ ಪರಿಷತ್ತುಗಳನ್ನು ಸ್ಥಾಪಿಸಲು ಮತ್ತು ಪಶುವೈದ್ಯಕೀಯ ವೃತ್ತಿದಾರರ ರಿಜಿಸ್ಟರುಗಳ ನಿರ್ವಹಣೆ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳಿಗೆ ಉಪಬಂಧ ಕಲ್ಪಿಸುವ ಅಧಿನಿಯಮ.
 12. ಕರ್ನಾಟಕ ಕೋಳಿ ಮತ್ತು ಜಾನುವಾರು ಆಹಾರಗಳು (ತಯಾರಿಕೆ ಮತ್ತು ಮಾರಾಟ ನಿಯಂತ್ರಣ)
  ದನಗಳ ಮತ್ತು ಕೋಳಿ ಆಹಾರ ತಯಾರಿಕೆ ಮತ್ತು ಮಾರಾಟವನ್ನು ನಿಯಂತ್ರಿಸುವ ಆದೇಶ 1987, ತಿದ್ದುಪಡಿ ಆದೇಶ 1991-92.
 13. ಪ್ರಾಣಿಹಿಂಸೆ ತಡೆಗಟ್ಟುವ ಅಧಿನಿಯಮ 1960
  ಪ್ರಾಣಿಗಳಿಗೆ ಅನಗತ್ಯವಾಗಿ ನೋವು ಅಥವಾ ಯಾತನೆ ಕೊಡುವುದನ್ನು ತಡೆಗಟ್ಟುವ ಅಧಿನಿಯಮ ಮತ್ತು ಪ್ರಾಣಿಹಿಂಸೆ ತಡೆಗಟ್ಟುವುದಕ್ಕೆ ಸಂಬಂಧಪಟ್ಟ ಕಾನೂನನ್ನು ತಿದ್ದುಪಡಿ ಮಾಡುವುದು.

 

ನೀತಿಗಳು

 

 1. ಕರ್ನಾಟಕ ಕೃಷಿ ಉದ್ಯಮ ಮತ್ತು ಆಹಾರ ಸಂಸ್ಕರಣೆ ನೀತಿ 2015
  ಈ ನೀತಿಯ ಸಂಪೂರ್ಣ ಮಾಹಿತಿಯನ್ನುಇಲ್ಲಿ ಓದಿರಿ.

ಇತ್ತೀಚಿನ ನವೀಕರಣ​ : 26-08-2022 03:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080