ಅಭಿಪ್ರಾಯ / ಸಲಹೆಗಳು

ಯೋಜನೆ ಮತ್ತು ಸವಲತ್ತುಗಳು

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವಿವಿಧ ಯೋಜನೆಗಳ  ವಿವರ 

 • ತಳಿ ಅಭಿವೃದ್ಧಿ
 • ಜಾನುವಾರು ವಿಮಾ ಯೋಜನೆ
 • ವಿಶೇಷ ಜಾನುವಾರು ಅಭಿವೃದ್ಧಿ ಯೋಜನೆ
 • ವಿಶೇಷ ಘಟಕ ಯೋಜನೆ (SCP)
 • ಗಿರಿಜನ ಉಪ ಯೋಜನೆ (TSP)
 • ಬರಡು ರಾಸು ಚಿಕಿತ್ಸಾ ಶಿಬಿರ
 • ಮೇವು ಅಭಿವೃದ್ಧಿ ಯೋಜನೆ
 • ರೈತರ ತರಬೇತಿ ಕಾರ್ಯಕ್ರಮ, ಇತರೆ. 

 

2023-24ನೇ ಸಾಲಿನ ಯೋಜನೆಗಳ ವಿವರ

1

ಹಾಲು ಉತ್ಪಾದಕರಿಗೆ ಉತ್ತೇಜನ:

ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಸರಬರಾಜು ಮಾಡುವ ಸದಸ್ಯರಿಗೆ ಪ್ರತಿ ಲೀಟರ್‌ ಹಾಲಿಗೆ   ರೂ. 5/- ರಂತೆ ಪ್ರೋತ್ಸಾಹಧನ ನೀಡಲಾಗುತ್ತಿದೆ.

 2

ಹಾಲು ಉತ್ಪಾದಕರಿಗೆ  ಉತ್ತೇಜನದ ಯೋಜನೆಯಡಿ   ಉಳಿತಾಯವಾಗುವ ಅನುದಾನದಲ್ಲಿ ವಿಶೇಷ  ಘಟಕ ಯೋಜನೆ  ಮತ್ತು ಗಿರಿಜನ ಉಪಯೋಜನೆಗಳಲ್ಲಿ  ಹೈನುಘಟಕ ವಿತರಣೆ.

 

ಕ್ರ ಸಂ

ಘಟಕದ ವಿವರ

ಘಟಕದ ಮೊತ್ತ

ಸಹಾಯಧನ ಶೇ90.

ಫಲಾನುಭವಿ ವಂತಿಕೆ /ಬ್ಯಾಂಕ್‌ ಸಾಲ

    1

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಒಂದು ಮಿಶ್ರ ತಳಿ ಹಸು ವಿತರಣೆ

 

    ರೂ.65000/-

     ರೂ.58500/-

       ರೂ.6500/-

3

ರಾಸುಗಳ ಆಕಸ್ಮಿಕ  ಆಪತ್ತು ನಿಧಿ:

ಆಕಸ್ಮಿಕ/ ಅಕಾಲಿಕ / ಅಪಘಾತಗಳಿಂದ ಮರಣ ಹೊಂದಿದ 6 ತಿಂಗಳು ಮೇಲ್ಪಟ್ಟ  ವಿಮೆಗೆ ಒಳಪಡಿಸದಿರುವ  ಹಸು, ಎಮ್ಮೆ, ಎತ್ತು, ಹೋರಿ ಕಡಸು ಮತ್ತು ಮಣಕಗಳಿಗೆ ರೂ. 10,000/- ದವರೆಗೆ ಪರಿಹಾರಧನವನ್ನು ಅವುಗಳ ಮಾಲೀಕರಿಗೆ ವಿತರಿಸಲಾಗುವುದು.

4

ವಿಶೇಷ ಘಟಕ ಯೋಜನೆ / ಗಿರಿಜನ ಉಪಯೋಜನೆಯಡಿ 6+1 ಕುರಿ/ಮೇಕೆ ಘಟಕ ವಿತರಣೆ (ಕರ್ನಾಟಕ ಕುರಿ ಮತ್ತು ಕುರಿ ಉಣ್ಣೆ  ಅಭಿವೃದ್ದಿ ನಿಗಮ ನಿಯಮಿತ):  

ಕ್ರ ಸಂ

ಘಟಕದ ವಿವರ

ಘಟಕದ ಮೊತ್ತ

ಸಹಾಯಧನ ಶೇ90.

ಫಲಾನುಭವಿ ವಂತಿಕೆ /ಬ್ಯಾಂಕ್‌ ಸಾಲ

    1

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 6+1 ಕುರಿ/ಮೇಕೆ ಘಟಕ ವಿತರಣೆ

    ರೂ.45000/-

     ರೂ.40500 /-

       ರೂ.4500/-

 5

ಸಣ್ಣ  ಪ್ರಾಣಿಗಳ  ಆಕಸ್ಮಿಕ  ಸಾವಿಗೆ  ಆಪತ್ತು  ನಿಧಿ(ಕರ್ನಾಟಕ ಕುರಿ ಮತ್ತು ಕುರಿ ಉಣ್ಣೆ  ಅಭಿವೃದ್ದಿ ನಿಗಮ ನಿಯಮಿತ): 

6 ತಿಂಗಳು  ಮೇಲ್ಪಟ್ಟ  ಕುರಿ/ಮೇಕೆಗಳ   ಆಕಸ್ಮಿಕ ಸಾವಿಗೆ ರೂ.5000/- ಮತ್ತು 3-6 ತಿಂಗಳ  ವಯಸ್ಸಿನ  ಕುರಿ/ಮೇಕೆ ಮರಿಗಳಿಗೆ ರೂ. 3500/- ಪರಿಹಾರಧನವನ್ನು  ಅವುಗಳ ಮಾಲೀಕರಿಗೆ ವಿತರಿಸಲಾಗುವುದು.

6

ಕುಕ್ಕುಟ ಸಹಕಾರ ಮಹಾಮಂಡಳಿ ವತಿಯಿಂದ ಕೋಳಿಮರಿ ವಿತರಣೆ:

5 ವಾರದವರೆಗೆ  ದೇಶಿ ಕೋಳಿಮರಿಗಳನ್ನು ಸಾಕಾಣಿಕೆ  ಮಾಡಿ  ಗ್ರಾಮೀಣ ರೈತ ಮಹಿಳೆಯರಿಗೆ/ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ  ತಲಾ 20 ಕೋಳಿ ಮರಿಗಳಂತೆ ವಿತರಿಸಲಾಗುವುದು.
7

ಪಿಂಜ್ರಾಪೋಲ್‌ ಗೋಶಾಲೆಗಳಿಗೆ ನೆರವು:

ರಾಜ್ಯದ  ಸರ್ಕಾರಿ ಮತ್ತು ಖಾಸಗಿ ಗೋಶಾಲೆಗಳಲ್ಲಿರುವ ಅನುತ್ಪಾದಕ ಹಾಗೂ ಪರಿತ್ಯಕ್ತ ರಾಸುಗಳ ನಿರ್ವಹಣೆಗೆ ಪ್ರತಿ ದಿನಕ್ಕೆ  ಒಂದು ಜಾನುವಾರಿಗೆ ರೂ.17.50/- ರಂತೆ  ನೆರವು ನೀಡಲಾಗುತ್ತಿದೆ.
8

ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ

ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ 20+1 ಕುರಿ/ಮೇಕೆ ಘಟಕಗಳನ್ನು ರಾಜ್ಯದಲ್ಲಿನ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿನ 20 ಸಾವಿರ ಆರ್ಥಿಕವಾಗಿ ಹಿಂದುಳಿದ ಪ್ರತಿ ಕುರಿಗಾಹಿ ಸದಸ್ಯರಿಗೆ ನೀಡಲಾಗುವ ಘಟಕ ವೆಚ್ಚ ರೂ.1,75,000/- ಗಳ ಪೈಕಿ ಶೇ.50 ರಷ್ಟನ್ನು ರಾಷ್ರ್ಟೀಯ ಸಹಕಾರ ಅಭಿವೃದ್ದಿ ನಿಗಮ (NCDC), ಸಹಕಾರ ಇಲಾಖೆ ಭಾರತ ಸರ್ಕಾರದ ವತಿಯಿಂದ ಸಾಲ, ಶೇ.25 ರಷ್ಟು ರಾಜ್ಯ ಸರ್ಕಾರದ ವತಿಯಿಂದ ಸಹಾಯ ಧನ ಮತ್ತು ಶೇ.25 ರಷ್ಟು ಫಲಾನುಭವಿಯ ವಂತಿಕೆಯ ಮೂಲಕ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ.
9

ಲಸಿಕಾ ಕಾರ್ಯಕ್ರಮ

ಗುರುತಿಸಲ್ಪಟ್ಟ ಸಾಂಕ್ರಾಮಿಕ ರೋಗಗಳ ವಿರುದ್ದ ಲಸಿಕೆ ಹಾಕುವುದು.

· ಕಾಲುಬಾಯಿಜ್ವರ ಮತ್ತು ಕಂದುರೋಗಗಳ ವಿರುದ್ಧ ಲಸಿಕಾ ಕಾರ್ಯಕ್ರಮಕ್ಕೆ ಶೇ. 100 ಕೇಂದ್ರದ ಅನುದಾನ 

· ಆಸ್ಕ್ಯಾಡ್ ಯೋಜನೆಯಡಿಯಲ್ಲಿ ಶೇ. 60 ಕೇಂದ್ರದ ಪಾಲು ಹಾಗೂ ಶೇ. 40 ರಾಜ್ಯದ ಪಾಲು ಅನುಪಾತದಲ್ಲಿ  ಅನುದಾನ (ಗಳಲೇರೋಗ, ಚಪ್ಪೆರೋಗ, ಕರುಳುಬೇನೆ, ನೆರಡಿರೋಗಗಳ ವಿರುದ್ದ ಲಸಿಕೆ ಹಾಕುವುದು.)

ಪಿ.ಪಿ.ಆರ್ ರೋಗದ ವಿರುದ್ದ ಲಸಿಕಾ ಕಾರ್ಯಕ್ರಮಕ್ಕೆ ಶೇ. 60 ಕೇಂದ್ರದ ಪಾಲು ಹಾಗೂ ಶೇ. 40 ರಾಜ್ಯದ ಪಾಲು ಅನುಪಾತದಲ್ಲಿ  ಅನುದಾನ

10

ಪ್ರಾಣಿ ಕಲ್ಯಾಣ ಸಹಾಯವಾಣಿ

ಜಾನುವಾರುಗಳಿಗೆ 24/7 ನಿರಂತರ ಸೇವೆಯನ್ನು ಒದಗಿಸಲು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ರೈತರು ಸಹಾಯವಾಣಿಯನ್ನು ಪ್ರಾರಂಭಿಸಲಾಗಿದ್ದು ಸಹಾಯವಾಣಿ  ಸಂಖ್ಯೆ 8277100200 ಮೂಲಕ ಸಂಪರ್ಕಿಸಿ ಇಲಾಖೆಯ ತಾಂತ್ರಿಕ ಸೇವೆಯನ್ನು ಪಡೆಯಬಹುದಾಗಿದೆ.
 

ಕೇಂದ್ರ ಪುರಸ್ಕ್ರತ ಯೋಜನೆ

 11

 ಕಿಸಾನ್ ಕ್ರೆಡಿಟ್ ಕಾರ್ಡ್:

(ಹೆಚ್ಚಿನ ಮಾಹಿತಿಗೆ ಇಲ್ಲಿ ವಿಕ್ಷೀಸಿ)

 
 • ಈ ಕಾರ್ಯಕ್ರಮವು ಹೈನುಗಾರಿಕೆ, ಕುರಿ, ಮೇಕೆ, ಕೋಳಿ, ಹಂದಿ ಮತ್ತು ಮೊಲ ಸಾಕಾಣಿಕೆ ಕಸುಬುಗಳಲ್ಲಿ ತೊಡಗಿಸಿಕೊಂಡ ರೈತರಿಗೆ ಅಲ್ಪಾವದಿಯ ದುಡಿಯುವ ಬಂಡವಾಳಕ್ಕೆ ಆರ್ಥಿಕ ನೆರವು ನೀಡುವ ಸದುದ್ದೇಶ ಹೊಂದಿದೆ
 • ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಬಡ್ಡಿ ರಿಯಾಯಿತಿ ಸೌಲಭ್ಯವು ರೂ. 3 ಲಕ್ಷಗಳವರೆಗೆ ದೊರೆಯಬಹುದಾಗಿದ್ದು, ಪ್ರತಿ ರೈತರಿಗೆ ರೂ.1.60 ಲಕ್ಷ ಸಾಲ ಸೌಲಭ್ಯವನ್ನು ಯಾವುದೇ ಭದ್ರತೆಯಿಲ್ಲದೆ ಪಡೆಯುವ ಅವಕಾಶವಿರುತ್ತದೆ.
 • ಕಿಸಾನ್ ಕ್ರೆಡಿಟ್ ಕಾರ್ಡ್‍ನಿಂದ ಪಡೆಯುವ ಸಾಲಕ್ಕೆ  ಶೇ.2 ರಷ್ಟು  ಬಡ್ಡಿ ಸಹಾಯಧನ ನೀಡುತ್ತಿದ್ದು, ಈ ಸಾಲವನ್ನು ಸಕಾಲದಲ್ಲಿ  ಮರುಪಾವತಿ ಮಾಡಿದಲ್ಲಿ ಹೆಚ್ಚುವರಿಯಾಗಿ ವಾರ್ಷಿಕ ಶೇ. 3 ರಷ್ಟು ಬಡ್ಡಿ ಸಹಾಯಧನದ ಸೌಲಭ್ಯವನ್ನು ಸಹಾ ಪಡೆಯಬಹುದಾಗಿದೆ.
12

NLM EDP ಉದ್ಯಮ ಶೀಲ ಕಾರ್ಯಕ್ರಮ:

(ಹೆಚ್ಚಿನ ಮಾಹಿತಿಗೆ ಇಲ್ಲಿ ವಿಕ್ಷೀಸಿ)

ಈ ಕಾರ್ಯಕ್ರಮವು ಗ್ರಾಮೀಣ ಕೋಳಿ ಉದ್ಯಮಶೀಲತೆ, ಕುರಿ, ಮೇಕೆ, ಹಂದಿ ಸಾಕಾಣಿಕೆ ಮತ್ತು ರಸಮೇವು ಉತ್ಪಾದನೆ ಘಟಕಗಳನ್ನು ಆರಂಭಿಸಲು ಆರ್ಥಿಕ ನೆರವು ನೀಡುವ ಯೋಜನೆಯಾಗಿದೆ.
13

PM-FME  ಯೋಜನೆ:

(ಹೆಚ್ಚಿನ ಮಾಹಿತಿಗೆ ಇಲ್ಲಿ ವಿಕ್ಷೀಸಿ)

ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ಭಾರತ ಸರ್ಕಾರದ "ಪ್ರಧಾನ ಮಂತ್ರಿಗಳ ಅತ್ತಿ ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆ"(PM-FME) ಜಾರಿಯಲ್ಲಿರುತ್ತದೆ. ಈ ಯೋಜನೆಯಡಿ ಹೊಸ ಉದ್ದಿಮೆ ಸ್ಥಾಪಿಸಲು/ಹಾಲಿ ಕಾರ್ಯನಿರ್ವಹಿಸುತ್ತಿರುವ ಡೈರಿ ಉತ್ಪನ್ನ/ಆಹಾರ ಸಂಸ್ಕರಣ ಘಟಕವನ್ನು ಉನ್ನತೀಕರಿಸಲು ಅವಕಾಶವಿರುತ್ತದೆ.
14 ಸಂಚಾರಿ ಪಶು ಚಿಕಿತ್ಸಾ ಘಟಕ: ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ  ರೈತರ ಮನೆಬಾಗಿಲಿಗೆ ತುರ್ತು ಅಗತ್ಯ ಪಶುವೈದ್ಯಕೀಯ ಸೇವೆಗಳನ್ನು ಒದಗಿಸಲು 290  ಸುಸಜ್ಜಿತ ಸಂಚಾರಿ ಪಶುಚಿಕಿತ್ಸಾ ವಾಹನಗಳನ್ನು  ಒದಗಿಸಿದೆ.
15 ಅಮೃತ ಸಿರಿ ಯೋಜನೆ: ಇಲಾಖೆಯ ಎಲ್ಲಾ ಜಾನುವಾರು ಕ್ಷೇತ್ರಗಳಲ್ಲಿ ಲಭ್ಯವಿರುವ ಹೆಚ್ಚುವರಿ ಹೆಣ್ಣು ಕರುಗಳನ್ನು/ಕಡಸುಗಳನ್ನು/ಹಸುಗಳನ್ನು/ಎಮ್ಮೆಗಳನ್ನು  ಅಮೃತ ಸಿರಿ ಯೋಜನೆ ಅಡಿಯಲ್ಲಿ ತಳಿಗಳು ಲಭ್ಯವಿರುವ ಜಿಲ್ಲೆಗಳಲ್ಲಿ ರೈತರಿಗೆ/ ದೇವವಾಸಿಯರಿಗೆ/ ವಿಧವೆಯರಿಗೆ/ War Widows/ಶವಸಂಸ್ಕಾರ ಕಾರ್ಮಿಕರಿಗೆ ಪುಸ್ತಕ ಬೆಲೆಯ ಶೇ.25 ರಂತೆ ವಿತರಿಸುವ ಕಾರ್ಯಕ್ರವನ್ನು ಅನುಷ್ಟಾನಗೊಳಿಸಲಾಗಿದೆ. ಆ ಮೂಲಕ ರೈತರು ಹೆಚ್ಚು ದೇಶಿ ತಳಿಯ ಹಸುಗಳ ಸಾಕಾಣಿಕೆ ಕೈಗೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ

 

2022-23ನೇ ಸಾಲಿನ ಯೋಜನೆಗಳ ವಿವರ

ಕ್ರ ಸಂ

ಕಾರ್ಯಕ್ರಮ

ವಿವರ

ವೀಕ್ಷಿಸಿ

1

ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ಕಾಯ್ದೆ 2013ರ ಅನ್ವಯ ಬಳಕೆಯಾಗದ ಮೊತ್ತ

 • ಪರಿಶಿಷ್ಟ ಜಾತಿ & ಪಂಗಡದ ಪಲಾನುಭವಿಗಳಿಗೆ ಶೇಕಡ 90% ಸಹಾಯಧನದಲ್ಲಿ ಹಸುಗಳ ರಬ್ಬರ್‌ ಮ್ಯಾಟ್‌ ವಿತರಿಸಲಾಗುವುದು

ಘಟಕದ ವಿವರ

ಘಟಕದ ವೆಚ್ಚ

ಸಹಾಯಧನ

ಪಲಾನುಭವಿ ವಂತಿಕೆ

ಎರಡು ರಬ್ಬರ್‌ ನೆಲಹಾಸು

ರೂ6190/-

ರೂ5571/-

ರೂ619/-

ವೀಕ್ಷಿಸಿ

2

ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದ ಅಡಿಯಲ್ಲಿ ಉಳಿಕೆಯಾಗುವ ಅನುದಾನದಲ್ಲಿ

ಪರಿಶಿಷ್ಟ ಜಾತಿ & ಪಂಗಡದ ಪಲಾನುಭವಿಗಳಿಗೆ ಶೇಕಡ 90% ಸಹಾಯಧನದಲ್ಲಿ ಹೈನು ಘಟಕ ಹಾಗೂ (10+1)ಕುರಿ/ಮೇಕೆ ಘಟಕ ವಿತರಣೆ

 

 

 

 

 • ಹೈನು ಘಟಕ ವಿತರಣೆ

ಘಟಕದ ವಿವರ

ಘಟಕದ ವೆಚ್ಚ

ಸಹಾಯಧನ

ಶೇಕಡ

90%

ಫಲಾನುಭವಿ

ವಂತಿಕೆ

10%

ಒಂದು ಮಿಶ್ರ ತಳಿ ಹಸು /ಸುಧಾರಿತ ತಳಿ ಎಮ್ಮೆ ವಿತರಣೆ

ರೂ.60,000/-

ರೂ.54,000/-

ರೂ.6000/-

ವೀಕ್ಷಿಸಿ

10+1 ಕುರಿ/ಮೇಕೆ ಘಟಕ ವಿತರಣೆ

ಘಟಕದ ವಿವರ

ಘಟಕದ ವೆಚ್ಚ

ಸಹಾಯಧನ

ಶೇಕಡ

90%

ಫಲಾನುಭವಿ

ವಂತಿಕೆ

10%

10+1 ಕುರಿ/ಮೇಕೆ ಘಟಕ ವಿತರಣೆ

 

ರೂ:66,000/-

ರೂ:59,400/-

ರೂ.6600/-

ವೀಕ್ಷಿಸಿ

3

ಕರ್ನಾಟಕ ಕುರಿ ಮತ್ತು ಕುರಿ ಉಣ್ಣೆ  ಅಭಿವೃದ್ದಿ ನಿಗಮ ನಿಯಮಿತ:

 

 • ನಿಗಮದಲ್ಲಿ ನೊಂದಣಿಯಾಗಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ  ಪಂಗಡದ/ ಪರಿಶಿಷ್ಟ ಜಾತಿ  (6+1) ರ ಕುರಿ/ ಮೇಕೆ ಘಟಕ ವಿತರಣೆ

 

6+1 ಕುರಿ/ಮೇಕೆ ಘಟಕ ವಿತರಣೆ

ಘಟಕ

ಘಟಕ ವೆಚ್ಚ

ಸಹಾಯಧನ

ಶೇಕಡ

90%

ಫಲಾನುಭವಿ

ವಂತಿಕೆ

10%

6+1 ಕುರಿ/ಮೇಕೆ ಘಟಕ ವಿತರಣೆ

ರೂ:45,000

ರೂ:40500

ರೂ.4500/-

 

 

·         ವಲಸೆ ಕುರಿಗಾಗರಿಗೆ ಸಂಚಾರಿ ಟೆಂಟ್, ಸೋಲಾರ್ ಟಾರ್ಚ್, ರಬ್ಬರ್ ಪ್ಲೂರ್ ಮ್ಯಾಟ್ ಮತ್ತು ರೇನ್ ಕೋಟ್ ಸೇರಿದಂತೆ ಪರಿಕರಗಳ ಕಿಟ್‍ಗಳ ವಿತರಣೆ

•       ಆರ್ಥಿಕವಾಗಿ ಹಿಂದುಳಿದ ಕುರಿಗಾರರಿಗೆ ವಸತಿ ಸೌಕರ್ಯದ ಜೊತೆಗೆ ಕುರಿ ದೊಡ್ಡಿ ನಿರ್ಮಿಸಲು ಐದು ಲಕ್ಷ ರೂ. ಸಹಾಯಧನ ನೀಡಲಾಗುವುದು.

•       ವಲಸೆ ಕುರಿಗಾರರು ಆಕಸ್ಮಿಕ ಮರಣ ಹೊಂದಿದಲ್ಲಿ ಅವಲಂಬಿತ ಕುಟುಂಬದವರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಕುರಿಗಾಹಿಗಳಿಗೆ ಐದು ಲಕ್ಷ ರೂ. ವಿಮಾ ಸೌಲಭ್ಯ ಒದಗಿಸಲಾಗುವುದು.

·         ಕುರಿ ಮತ್ತು ಮೇಕೆಗಳ ಆಕಸ್ಮಿಕ ಸಾವಿಗೆ ಕುರಿ ಮಾಲೀಕರಿಗೆ ಅನುಗ್ರಹ ಕೊಡುಗೆ :

         ಪ್ರಕೃತಿ ವಿಕೋಪ ಪರಿಹಾರ ವ್ಯಾಪ್ತಿಯಲ್ಲಿ ಬರುವ ಹಾಗೂ ವಿಮೆ ಮಾಡಿಸಿದ ಪ್ರಕರಣಗಳನ್ನು ಹೊರತುಪಡಿಸಿ ಇನ್ನುಳಿದ ಸಂದರ್ಭಗಳಲ್ಲಿ 6 ತಿಂಗಳು ಮೇಲ್ಪಟ್ಟ ಕುರಿ ಮತ್ತು ಮೇಕೆ ಆಕಸ್ಮಿಕ ಅಥವಾ ದೃಢೀಕೃತ ಸಾಂಕ್ರಾಮಿಕ ರೋಗಗಳಿಂದ ಮರಣ ಹೊಂದಿದ ಪ್ರಕರಣಗಳಲ್ಲಿ  ಕುರಿ /ಮೇಕೆ ಗೆ ರೂ. 5000/- ಪರಿಹಾರ ಧನ ಹಾಗೂ 3-6 ತಿಂಗಳ ವಯಸ್ಸಿನ ಕುರಿ/ ಮೇಕೆಗಳಿಗೆ 3500 ರೂ.  ಪರಿಹಾರ ಧನವನ್ನು ನೀಡಲಾಗುವುದು.

ವೀಕ್ಷಿಸಿ

4

ಲಸಿಕಾ ಕಾರ್ಯಕ್ರಮ

·         ಗುರುತಿಸಲ್ಪಟ್ಟ ಸಾಂಕ್ರಾಮಿಕ ರೋಗಗಳ ವಿರುದ್ದ ಲಸಿಕೆ ಹಾಕುವುದು.

·         ಕಾಲುಬಾಯಿಜ್ವರ ಮತ್ತು ಕಂದುರೋಗಗಳ ವಿರುದ್ಧ ಲಸಿಕಾ ಕಾರ್ಯಕ್ರಮಕ್ಕೆ ಶೇ. 100 ಕೇಂದ್ರದ ಅನುದಾನ 

·         ಆಸ್ಕ್ಯಾಡ್ ಯೋಜನೆಯಡಿಯಲ್ಲಿ ಶೇ. 60 ಕೇಂದ್ರದ ಪಾಲು ಹಾಗೂ ಶೇ. 40 ರಾಜ್ಯದ ಪಾಲು ಅನುಪಾತದಲ್ಲಿ  ಅನುದಾನ (ಗಳಲೇರೋಗ, ಚಪ್ಪೆರೋಗ, ಕರುಳುಬೇನೆ, ನೆರಡಿರೋಗಗಳ ವಿರುದ್ದ ಲಸಿಕೆ ಹಾಕುವುದು.)

ಪಿ.ಪಿ.ಆರ್ ರೋಗದ ವಿರುದ್ದ ಲಸಿಕಾ ಕಾರ್ಯಕ್ರಮಕ್ಕೆ ಶೇ. 60 ಕೇಂದ್ರದ ಪಾಲು ಹಾಗೂ ಶೇ. 40 ರಾಜ್ಯದ ಪಾಲು ಅನುಪಾತದಲ್ಲಿ  ಅನುದಾನ

ವೀಕ್ಷಿಸಿ

5

ಹಾಲು ಉತ್ಪಾದಕರಿಗೆ ಉತ್ತೇಜನ:

 

·         ಹಾಲು ಉತ್ಪಾದನೆಗೆ ಉತ್ತೇಜನ ನೀಡಲು ಕರ್ನಾಟಕ ಹಾಲು ಮಹಾ ಮಂಡಳಿಗೆ  ಹಾಲು ಸರಬರಾಜು ಮಾಡುವ ಸದಸ್ಯರಿಗೆ ಪ್ರತಿ ಲೀಟರ್‍ ಗೆ ರೂ. 5/- ರಂತೆ ಪ್ರೋತ್ಸಾಹಧನ ನೀಡಲಾಗುವುದು.

ವೀಕ್ಷಿಸಿ

6

ನಾಟಿ ಕೋಳಿಮರಿ ವಿತರಣೆ

·         5 ಲಕ್ಷ ಕೋಳಿಮರಿಗಳನ್ನು ಉತ್ಪಾದಿಸಿ ರೈತ ಮಹಿಳೆಯರಿಗೆ   ತಲಾ 20  ನಾಟಿಕೋಳಿಮರಿ   (5ವಾರದ ಕೋಳಿಮರಿಗಳು)  ವಿತರಿಸಲಾಗುವುದು.

ವೀಕ್ಷಿಸಿ

7

ಪ್ರಾಣಿ ಕಲ್ಯಾಣ ಸಹಾಯವಾಣಿ

•      ಜಾನುವಾರುಗಳಿಗೆ 24/7 ನಿರಂತರ ಸೇವೆಯನ್ನು ಒದಗಿಸಲು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ರೈತರು ಸಹಾಯವಾಣಿಯನ್ನು ಪ್ರಾರಂಭಿಸಲಾಗಿದ್ದು ಸಹಾಯವಾಣಿ  ಸಂಖ್ಯೆ 8277100200 ಮೂಲಕ ಸಂಪರ್ಕಿಸಿ ಇಲಾಖೆಯ ತಾಂತ್ರಿಕ ಸೇವೆಯನ್ನು ಪಡೆಯಬಹುದಾಗಿದೆ.

ವೀಕ್ಷಿಸಿ

 

ಕೇಂದ್ರ ಪುರಸ್ಕ್ರತ ಯೋಜನೆ

8

ರಾಷ್ಟ್ರೀಯ ಜಾನುವಾರು ಮಿಷನ್

·         ವಿಪತ್ತು ನಿರ್ವಹಣೆ-ಜಾನುವಾರು ವಿಮಾ ಯೋಜನೆ,

•      ಕಾರ್ಯಕ್ರಮದಡಿ  ಜಾನುವಾರುಗಳಿಗೆ   ವಿಮಾ ಸೌಲಭ್ಯ ಒದಗಿಸಲಾಗಿದೆ.  ಫಲಾನುಭವಿಗಳ ಬೆಲೆಯುಳ್ಳ ಹೈನುಗಾರಿಕೆಗೆ ಯೋಗ್ಯವಾದ ಒಂದು ವರ್ಷ ಮೇಲ್ಪಟ್ಟ ಮತ್ತು ವಿಮೆಗೊಳಪಡಿಸುವ ಸಮಯದಲ್ಲಿ ಗರಿಷ್ಟ ವಯಸ್ಸು 8 ವರ್ಷಗಳಿಗೆ ಮೀರದಂತಹ ಮಣಕ /ಆಕಳು / ಎಮ್ಮೆಗಳನ್ನು ಒಂದು ವರ್ಷದ/ ಮೂರು ವರ್ಷದ ಅವಧಿಗೆ ಮಾರುಕಟ್ಟೆ ಮೌಲ್ಯದ ಶೇಕಡ 2%/6% ಪ್ರೀಮಿಯಂ ದರದಲ್ಲಿ ಗರಿಷ್ಟ ರೂ. 70 ಸಾವಿರ ಮೂಲ ಬೆಲೆಯವರೆಗೆ ಕೆಳಕಂಡ ಪ್ರೀಮಿಯಂ ಸಹಾಯಧನದ ದರದಂತೆ ವಿಮೆ ಸೌಲಭ್ಯ ಒದಗಿಸುವುದು.

 

ಫಲಾನುಭವಿಯ ವರ್ಗ

ಸಹಾಯಧನ

ಫಲಾನುಭವಿಯ

ವಂತಿಗೆ

ಬಿಪಿಎಲ್‌/ಎಸ್.ಸಿ.ಪಿ/ಟಿ.ಎಸ್.ಪಿ./ ಫಲಾನುಭವಿಗಳು

70%

30%

ಎಪಿಎಲ್‌ ಫಲಾನುಭವಿಗಳು

50%

50%

ವೀಕ್ಷಿಸಿ

9

ಕಿಸಾನ್ ಕ್ರೆಡಿಟ್ ಕಾರ್ಡ್:

 

 • ಈ ಕಾರ್ಯಕ್ರಮವು ಹೈನುಗಾರಿಕೆ, ಕುರಿ, ಮೇಕೆ, ಕೋಳಿ, ಹಂದಿ ಮತ್ತು ಮೊಲ ಸಾಕಾಣಿಕೆ ಕಸುಬುಗಳಲ್ಲಿ ತೊಡಗಿಸಿಕೊಂಡ ರೈತರಿಗೆ ಅಲ್ಪಾವದಿಯ ದುಡಿಯುವ ಬಂಡವಾಳಕ್ಕೆ ಆರ್ಥಿಕ ನೆರವು ನೀಡುವ ಸದುದ್ದೇಶ ಹೊಂದಿದೆ
 • ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಬಡ್ಡಿ ರಿಯಾಯಿತಿ ಸೌಲಭ್ಯವು ರೂ. 3 ಲಕ್ಷಗಳವರೆಗೆ ದೊರೆಯಬಹುದಾಗಿದ್ದು, ಪ್ರತಿ ರೈತರಿಗೆ ರೂ.1.60 ಲಕ್ಷ ಸಾಲ ಸೌಲಭ್ಯವನ್ನು ಯಾವುದೇ ಭದ್ರತೆಯಿಲ್ಲದೆ ಪಡೆಯುವ ಅವಕಾಶವಿರುತ್ತದೆ.
 • ಕಿಸಾನ್ ಕ್ರೆಡಿಟ್ ಕಾರ್ಡ್‍ನಿಂದ ಪಡೆಯುವ ಸಾಲಕ್ಕೆ  ಶೇ.2 ರಷ್ಟು  ಬಡ್ಡಿ ಸಹಾಯಧನ ನೀಡುತ್ತಿದ್ದು, ಈ ಸಾಲವನ್ನು ಸಕಾಲದಲ್ಲಿ  ಮರುಪಾವತಿ ಮಾಡಿದಲ್ಲಿ ಹೆಚ್ಚುವರಿಯಾಗಿ ವಾರ್ಷಿಕ ಶೇ. 3 ರಷ್ಟು ಬಡ್ಡಿ ಸಹಾಯಧನದ ಸೌಲಭ್ಯವನ್ನು ಸಹಾ ಪಡೆಯಬಹುದಾಗಿದೆ.

ವೀಕ್ಷಿಸಿ

10

NLM EDP ಉದ್ಯಮ ಶೀಲ ಕಾರ್ಯಕ್ರಮ:

 

ಕ್ರ ಸಂ

ಉದ್ಯಮಿ ಘಟಕಗಳು

ಘಟಕ

% ಸಹಾಯಧನ

ಗರಿಷ್ಠ ಸಹಾಯಧನ

1

ಗ್ರಾಮೀಣ ಕೋಳಿ ಸಾಕಾಣಿಕೆ ಘಟಕ

1000+100

50%

25 ಲಕ್ಷ

2

ಕುರಿ /ಮೇಕೆ ತಳಿ ಸಂವರ್ಧನಾ ಉದ್ಯಮಿ ಘಟಕ

500+25

50%

50 ಲಕ್ಷ

3

ಹಂದಿ ತಳಿ ಸಂವರ್ಧನಾ ಉದ್ಯಮಿ ಘಟಕ :

100+10

50%

30 ಲಕ್ಷ

4

ಮೇವು ಬಿಲ್ಲೆ/ ರಸಮೇವು ಉದ್ಯಮಿ ಘಟಕ

 

50%

50 ಲಕ್ಷ

 

 

ವೀಕ್ಷಿಸಿ

11

ಪಶು ಸಂಜೀವಿನಿ(ಸಂಚಾರಿ ಪಶು ಶಸ್ತ್ರಚಿಕಿತ್ಸಾ ವಾಹನ):

ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ  ರೈತರ ಮನೆಬಾಗಿಲಿಗೆ ತುರ್ತು ಅಗತ್ಯ ಪಶುವೈದ್ಯಕೀಯ ಸೇವೆಗಳನ್ನು ಒದಗಿಸಲು 290  ಸುಸಜ್ಜಿತ ಸಂಚಾರಿ ಪಶುಚಿಕಿತ್ಸಾ ವಾಹನಗಳನ್ನು  ಒದಗಿಸಿದೆ.

ವೀಕ್ಷಿಸಿ

12

ಅಮೃತ ಸಿರಿ ಯೋಜನೆ

ಇಲಾಖೆಯ ಎಲ್ಲಾ ಜಾನುವಾರು ಕ್ಷೇತ್ರಗಳಲ್ಲಿ ಲಭ್ಯವಿರುವ ಹೆಚ್ಚುವರಿ ಹೆಣ್ಣು ಕರುಗಳನ್ನು/ಕಡಸುಗಳನ್ನು/ಹಸುಗಳನ್ನು/ಎಮ್ಮೆಗಳನ್ನು  ಅಮೃತ ಸಿರಿ ಯೋಜನೆ ಅಡಿಯಲ್ಲಿ ತಳಿಗಳು ಲಭ್ಯವಿರುವ ಜಿಲ್ಲೆಗಳಲ್ಲಿ ರೈತರಿಗೆ/ ದೇವವಾಸಿಯರಿಗೆ/ ವಿಧವೆಯರಿಗೆ/ War Widows/ಶವಸಂಸ್ಕಾರ ಕಾರ್ಮಿಕರಿಗೆ ಪುಸ್ತಕ ಬೆಲೆಯ ಶೇ.25 ರಂತೆ ವಿತರಿಸುವ ಕಾರ್ಯಕ್ರವನ್ನು ಅನುಷ್ಟಾನಗೊಳಿಸಲಾಗಿದೆ. ಆ ಮೂಲಕ ರೈತರು ಹೆಚ್ಚು ದೇಶಿ ತಳಿಯ ಹಸುಗಳ ಸಾಕಾಣಿಕೆ ಕೈಗೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ.

 

ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 16-09-2023 11:52 AM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080